ಫಾರ್ಟಿ ಲವ್
*ಫಾರ್ಟಿ ಲವ್* ಅಂಕಣದಲ್ಲಿ ಚಂಡಿನ ನರ್ತನ ಗಾಳಿಯಲ್ಲಿ ಉದ್ವಿಗ್ನತೆಯ ಕೀರ್ತನ ಕ್ರೀಡಾಪಟುಗಳು ಎರಡು ಕಡೆ ನಿಂತಿರಲು ಹೋರಾಟಕ್ಕೆ ಪರಸ್ಪರ ಆಮಂತ್ರಣ ಪ್ರತಿ ಅಂಕಕ್ಕೂ ಹೋರಾಡಲು ಸಿದ್ದರಾಗಿರಲು ರಾಕೆಟ್ಟುಗಳ ಕ್ಷಿಪ್ರ ಚಲನೆ ಆ ಸರ್ವಿಸ್ ನ ವಕ್ರತೆ ಪ್ರತಿ ಅಂಕದ ಮೇಲೆ ಪ್ರೇಕ್ಷಕರ ಗಮನ ಗಾಳಿಯಲ್ಲಿ ಚಂಡಿನ ವಿನಿಮಯದಲ್ಲಿ ಆಟಗಾರರ ಕೌಶಲ್ಯದ ಪ್ರದರ್ಶನ ಚಿರು ಅಂಗಳದಲ್ಲಿಯೇ ಯೋಜನೆಗಳ ಹೋರಾಟ ಮೆದುಳುಗಳ ಪರಸ್ಪರ ಕಾದಾಟ ಪ್ರತಿ ನಡೆಗೂ ನಾಜೂಕಿನ ಕೈಚಳಕ ಎಲ್ಲರೂ ಬಂದಿರುವರು ಆಟವನ್ನು ಪ್ರೀತಿಸಲು ಆಟಗಾರರು ತಮ್ಮನ್ನು ತಾವೇ ಎತ್ತರಕ್ಕೆ ಒಯ್ಯಲು ಪ್ರಯತ್ನಿಸಿರುವರು ಅಂಕಣವೇ ಪಟ್ಟುಗಳ ರಣರಂಗ ಫಾರ್ಟಿ ಲವ್ ಯಾವಾಗಲೂ ಅವರ ನಿರ್ಧಾರ ಹೊಡೆತಕ್ಕೆ ಪ್ರತಿ ಹೊಡೆತದ ಹೋಲಿಕೆಯ ಅನುರಣನ ಯಾರೊಬ್ಬರೂ ಸೋಲಲು ಸಿದ್ದರಿಲ್ಲ ಏಕಾಗ್ರತೆಯ ಈ ಕಾದಾಟದಲ್ಲಿ ಪ್ರತಿ ಹೊಡೆತವು ಒಂದು ಲೆಕ್ಕಾಚಾರದ ನೋಟ ಅಂಕಣದುದ್ದಕ್ಕೂ ಕ್ರೀಡಾಪಟುಗಳ ಸಂಗೀತ ರಹಿತ ನರ್ತನ ನಿರಂತರತೆ ಮತ್ತು ಕ್ಷಿಪ್ರತೆ ಮತ್ತು ಸಹನೆಗಳ ಸಮಾಗಮ ಎಲ್ಲರೂ ಹೋರಾಡುವರು ಒಂದು ಹೆಚ್ಚಿನ ಅಂಕಕ್ಕಾಗಿ ಕೊನೆಗೆ ಗೆಲ್ಲುವುದು ಟೆನ್ನಿಸ್ ನ ಪರಾಕಾಷ್ಠೆ ಈ ಅವಕಾಶಕ್ಕಾಗಿ ಎಲ್ಲರೂ ಒಂದೇ ಸಮಾನರು ಫಾರ್ಟಿ ಲವ್ ಅಥವಾ ಲವ್ ಫಾರ್ಟಿ ಅಂತಿಮವಾಗಿ ಒಂದಾಗುವವರು ಆಟಗಾರರು ಲವ್ ಆಲ್ ಎಂದು. -ಶಹಾಬುದ್ದೀನ್
Poetry Books 50% Off
Bestselling collections from top poets
