ನಮಸ್ಕಾರ
ವರ್ಷಗಳು ಹುರುಳುತ್ತಿರಲು ಹರುಷದ ಹೊನಲು ಕಡಿಮೆಯಾಗುತ್ತಿಹುದೆಂಬ ಭಾವ ಎದೆಯೊಳಗೆ ಮೂಡುತ್ತಿತ್ತು... ನನ್ನ ಹರುಷವ ಹೆಚ್ಚಿಸಲು ಈ ವರುಷ ನನಗಾಗಿ ಬಂದ ನಿನ್ನ ಸ್ನೇಹಕ್ಕೆ ಮನಪೂರ್ವ ನಮಸ್ಕಾರಗಳು.. ಕಂಡರೂ ಮಾತನಾಡದ ಜನರ ಮಧ್ಯೆ ಕಣ್ಣಲ್ಲೇ ಮಾತಾಡೋ ನಿನ್ನ ಪಡೆದಿದ್ದು ನನ್ನ ಪುಣ್ಯ ಯಾರಿಗೂ ಹೇಳದ ಅನೇಕ ಸಂಗತಿಗಳ ಸಂಕೋಚವೆ ಪಡದೆ ಮುಕ್ತವಾಗಿ ಮಾತಾಡುವ ಅವಕಾಶ ಸಿಕ್ಕಿದ್ದು ನಿನ್ನೊಟ್ಟಿಗೆ ಮಾತ್ರ.... ದಿನವಿಡೀ ನಿನ್ನ ನೋಡದಿದ್ದರೂ ನಿನ್ನೊಡನೆ ಒಡನಾಟವಿಲ್ಲದಿದ್ದರೂ ಕೇವಲ ಕ್ಷಣಗಳ ಆ ಸಮಯ ನನಗೆ ಅತ್ಯಂತ ಪ್ರಾಮುಖ್ಯವಾದೆಂಬುದು ಮಾತ್ರ ಕಟು ಸತ್ಯ.....
Ad
Poetry Books 50% Off
Bestselling collections from top poets
Shop Now →
