ತಿರುಕನ ಬೇಡಿದರೇನು ಫಲ
ಯಾವ ದೇವರ ಪೂಜಿಸಿದರೇನು ಫಲ ಯಾರಿಗಾದರೂ ಕಂಡನೇ ಅವನು. ಕಾಣಲಾರದ ಹೇಡಿ ಅವನು ಬಚ್ಚಿಟ್ಟುಕೊಂಡೇ... ಆಡುವ ಕಳ್ಳನವನು. ನೀ ಕರೆದರೂ ಬರಲಾರದವನ ಬೇಡಿದರೇನು ಫಲ ಕರೆಯುವವರು ಬಹಳಿದ್ದಾರೆಂಬ ಸೊಕ್ಕಿನವನು. ಕರೆಯದಿರು ಮತ್ತೊಮ್ಮೆ ಪದೇ ಪದೇ ಬರದೇ ಕಾಯಿಸುವವ ಮಳ್ಳನವನು. ಅವನ ಊರೂರು ಸುತ್ತಿಸಿದರೇನು ಫಲ ನಿನಗೆ ನೋವಾಗುವುದು ಗೊತ್ತಿಲ್ಲದವನು. ನೋವ ತೋಡಿಕೊಳ್ಳದಿರು ಅವನ ಬಳಿ ನೋವಿಗೆ ಸ್ಪಂದಿಸದ ಕ್ರೂರಿ ಅವನು. ದೇವರೇ... ಬಾ ಎಂದು ಕೂಗಿದರೇನು ಫಲ ಕೇಳಿದರೂ ಕಲ್ಲಾಗಿ ಕೂತಿಹನು ಅವನು. ಬೇಡದಿರು ಕೋರದಿರು ಪೂಜಿಸದೇ ಬಿಟ್ಟು ಬಿಡು ನೀಡಿದ್ದ ತಿನ್ನದೇ..... ಕೂತ ತಿರುಕನವನು. ನೀ ಕೊಟ್ಟ ಎಡೆಗೆ ಕಾಯುತ್ತಾ ಕೂತ ಅಂತಹ ಸೋಂಬೇರಿ ದೇವನವನು ಮೆರೆಸದಿರು ನೀಡದಿರು ಮತ್ತೊಮ್ಮ ಬೇಡದಿರು ಹಸಿದಾಗ ನೋಢೋಣ ಅವ ಬರುವನೇನು ಹಸಿದಾಗ ನೋಡೋಣ ಅವ ಬರುವನೇನು? -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
