ಕೊರತೆ
ಬರೆದಿಡಲು ಪದಗಳ ಕೊರತೆ ನಿನ್ನೊಂದಿಗೆ ಕಳೆದ ಕ್ಷಣಗಳ ಮುದ್ರಿಸಲು.... ನೀ ಖುಷಿ ಇಲ್ಲವೆಂಬ ಸತ್ಯವೊಂದೇ ನನಗಿನ್ನೂ ಮರೆಯಲಾಗದ ಬೇಜಾರು... ನಿನ್ನ ಅತಿ ನಂಬಿಕೆ ನಿನಗೇ ನೋವು ಮಾಡುತ್ತಿಹುದು ಯಾರೊಂದಿಗೂ ಹಂಚಿಕೊಳ್ಳಲಾಗದ ದುಗುಡ ನಿನ್ನಲ್ಲಿರುವ ಸಂಕಟ ಆದರೂ ನಗುತಿರುವೆ ನಮ್ಮೊಡನೆ ಎಲ್ಲವ ಮರೆತಂತೆ... ನಿನ್ನ ಕಷ್ಟಕ್ಕೆ ಸಹಾಯ ಮಾಡುವ ಶಕ್ತಿ ನನಗಿಲ್ಲವಲ್ಲ ಎಂದು ಮರುಗುತ್ತಿರುವೆ ಗೆಳತಿ.... ಆಗಿದ್ದೂ ಒಳ್ಳೆಯದಕ್ಕೇ ಆಗುವುದೆಲ್ಲ ಒಳ್ಳೆಯದಕ್ಕೇ... ನಂಬು ಆದರೇ ಮಿತಿ ಮೀರಿ ನಂಬಬೇಡವಷ್ಟೇ.... ಕ್ಷಮಿಸೆನ್ನ ನಿನಗಿರುವ ಸಂಕಟಕೆ ಈ ಸಾಲುಗಳ ಗೀಚುತ್ತಿರುವುದಕೆ......
Ad
Poetry Books 50% Off
Bestselling collections from top poets
Shop Now →
