ಗೆಳತಿ
ಕಾಳಜಿಯಷ್ಟೇ ನಾ ನಿನಗೆ ನೀಡಬಲ್ಲ ಪ್ರೀತಿ ಸಮಯವಷ್ಟೇ ನಾ ನಿನ್ನ ನೋಡಿಕೊಳ್ಳುವ ರೀತಿ ಪಡೆದುಕೊಂಡ ನಿನ್ನನ್ನು ಕಳೆದುಕೊಳ್ಳುವೆನೇ ಎಂಬ ಭೀತಿ ನಿನ್ನ ಬಯಕೆಯಂತೆಯೇ ನನ್ನ ರೀತಿ-ನೀತಿ ನೀ ಜೊತೆಯಿರು ಸಾಕೆನಗೆ ಅದುವೆ ಮನಕೆ ಶಾಂತಿ ನೀ ಮರೆಯಾದೊಡನೆ ಎದೆಯಲ್ಲಿ ಬುಗಿಲೆದ್ದ ಕ್ರಾಂತಿ ನಿನ್ನ ಬೆಚ್ಚನೆಯ ಅಪ್ಪುಗೆಯಲಿ ನನ್ನ ವಿಶ್ರಾಂತಿ ನನ್ನೀ ನಿನ್ನ ಮೇಲಿನ ಪ್ರೇಮಕೆ ಇಲ್ಲ ಯಾವುದೇ ಇತಿಮಿತಿ ನಿನ್ನ ಹೊರೆತು ಯಾರಿಹರು ಹೇಳು ಗೆಳತಿ....
Ad
Poetry Books 50% Off
Bestselling collections from top poets
Shop Now →
