ಅವನು
ನನ್ನ ಹಿಂದೆ ಹಿಂದೆಯೇ ಸುತ್ತಿದೆ ನೀ ಅಂದು... ಅದರ ಅರ್ಥ ತಿಳಿಯಲಾರಳಾದೆ ನಾ ಅಂದು... ಮನದ ಅಪಾರ ಪ್ರೀತಿಯ ತಿಳಿಸಲು ನೀ ಪರದಾಡಿದೆ ಅಂದು... ನಿನ್ನೆಲ್ಲಾ ಪ್ರಯತ್ನವ ನಾ ಅರಿಯದವಳಾದೆ ನಾ ಅಂದು... ನನ್ನ ಮನ ಇಂದು ನಿನ್ನನ್ನು ನೆನೆ ನೆನೆದು... ನಿನ್ನ ಬರುವಿಕೆಗಾಗಿ ನಿನ್ನ ದಾರಿಯನ್ನೇ ಕಾದಿಹುದು... ನಿನ್ನ ಹಿಂದೆ ಹಿಂದೆಯೇ ಸುತ್ತಬೇಕಿದೆ ನಾ ಇಂದು... ನೀನೆಂದು ಬರುವೆ ನಾ ಕಾದಿರುವೆ ನಿನ್ನ ಕಾಣಲೆಂದು... ಸದಾ ನಿನ್ನನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುವ ನನ್ನೀ ಮನ... ನಿನ್ನ ಕಣ್ಣಿನ ಕಾಮನಬಿಲ್ಲಿನ ಬಣ್ಣದ ಚಿತ್ತಾರಕ್ಕಾಗಿ ಕಾದಿದೆ ನನ್ನೀ ಜೀವನ... @Kavyarsmiley
Ad
Poetry Books 50% Off
Bestselling collections from top poets
Shop Now →
