ದ್ವಾಪರಯುಗಾಂತ್ಯದ ಕಲಿಯುಗದ ದೇವ ma
ನಾಡಗೌಡ ಹುಟ್ಟಿದ್ದು ಶಿವ ಪೂಜಿಸುವ ಲಿಂಗದಲ್ಲಿ ಪರಮೇಶ್ವರನ ಸೇವೆ ಮಾಡುತ್ತಿದ್ದ ಗುರು-ಚಿತ್ತದಲ್ಲಿ ಮಹಾನು ತಪಸ್ವಿ ಅಡಕೆಶ್ವರನ ನಾಮದಲ್ಲಿ ಶಿವ -ಪಾರ್ವತಿ ಪ್ರೀತಿ ಗಳಿಸಿದ್ದ ಭಕ್ತಿಯಲ್ಲಿ ಶಿವನು ಭೂಮಿಗೆ ಕಳಿಸಿದನು ದ್ವಾಪರಯುಗ ಅಂತ್ಯದ ಕಲಿಯುಗದ ಆರಂಭದಲ್ಲಿ ಈಶ್ವರನ ಆಜ್ಞೆಯಲ್ಲಿ ಪವಾಡ ಮಾಡುತ್ತ ನಡೆದಾರ ಕರುನಾಡಿನಲ್ಲಿ ಭೂಮಿಗೆ ಬಂದನೋ ದೇವ ಮಾನವ ಸೋಮಲಿಂಗ ಆಗಿದ್ದ ನಿನ್ನ ಗುರುವ ಕೇಳಿದ್ದು ಕೊಡುತಿದ್ದ ವರವ ಯಾರಿಗೂ ಮಾಡಲಿಲ್ಲ ಭೇದ ಭಾವ ಕಲಿಯುಗದಲ್ಲಿ ನಡೆದೈತಿ ಗುರು ಶಿಷ್ಯರ ಒಡೆತನ ಅಮೋಘ ಸಿದ್ದಗ ತಪ್ಪಲಿಲ್ಲ ಶಿವನ ಕಾಟ ಕಡೆತಸಂಸಾರಿ ಆಗು ಎಂದು ಬಂದೈತಿ ವಚನ ಆ ಊರ ಪಾಟೀಲನ ಮಗಳು ಇದ್ದಳು ಪದ್ಮಾವತಿ ಬೆತ್ತದ ಜೊತೆ ಮದುವೆ ಆಗೈತಿ ಪದ್ಮಾವತಿ ಆಗ್ಯಾಳ ಅಮೋಘ ಸಿದ್ದನ ಸತಿ ಶಿವನ ವರದಿಂದ ಜನಿಸಿದರು ಮಹಾಸಿದ್ದ ಅವದೂತ ಸಿದ್ದ, ಬಿಳಿಯಾನ ಸಿದ್ದ ಇವರ ಮನಸು ಇತ್ತು ಬಹಳ ಶುದ್ಧ ತಂದೆಯವರ ಆಜ್ಞೆಗೆ ಸದಾ ಇರುತಿದ್ದರು ಸಿದ್ದ . ಮುಮ್ಮೆಟ ಗುಡ್ಡದ ಒಡೆಯ ಬಹಳ ನಿಮ್ಮ ಕಥೆಸಾರ ನಾನಲ್ಲ ದೊಡ್ಡ ಸಾಹಿತ್ಯಗಾರ ತಿಳಿದಷ್ಟು ಬರೆದಿರುವೆ ನಿಮ್ಮನ್ನು ನೆನಸ್ಕೊಂಡು ಹಣೆಗೆ ಹಚ್ಚಿ ಭಂಡಾರ ಫ.ಬ. ಜಿಗಳೂರ
Poetry Books 50% Off
Bestselling collections from top poets
