ಶಾಲೆ ತೆರೆಯುತ್ತಿದೆ
§ಗುಣಿತಕ್ಷರ ಕವನ §ಕ' ಗುಣಿತ § ಶಾಲೆ ತೆರೆಯುತಿದೆ ಕರೆಯುತಿದೆ ಶಾಲೆ ಕಾಯುತಿದೆ ನಾಳೆ ಕಿಟಕಿ ತೆರೆಯಲಿ ಕೀಟ ತೊಲಗಲಿ ಕುಳಿತು ನೆಲದಲ್ಲಿ ಕಲಿಯುತ ಕೂಡಿ ಗೆಳೆಯರ ಊಟ ಸವಿಯುತ ಕೃತಿ ಸಂಪುಟದ ಹಾಳೆ ಜೋಡಿಸಲು ಕೆಲವರು ಬಂದೇ ಬರುವರು ಕೇಳೆ ಕೇಳಿ ತಿಳಿವರು ಸುದ್ದಿ ಕೈ ಬೀಸಿ ಕರೆಯಲು ಬುದ್ಧಿ ಕೊಡುವ ಪುಸ್ತಕ ಬಟ್ಟೆ ಕೋಲು ಹಿಡಿಯದೇನೆ ಕೌತುಕದಿ ಪಾಠ ಕಲಿಯಲು ಕಂಗೆಡದಿರಿ ಕನ್ನಡ ಶಾಲೆ ಕಹಳೆಯ ಊದುವ ನಾಳೆ ಬನ್ನಿ ಇದು ಸರಿಯಾದ ವೇಳೆ. *©ಶ್ರೀಮನನ್ಮೋಹನ™®* *ಹಾಸನ ಜಿಲ್ಲೆ ಮೈಸೂರು ಪ್ರಾಂತ್ಯ*
Ad
Poetry Books 50% Off
Bestselling collections from top poets
Shop Now →
